.

Yash Upcoming Movies: "ಯಶ್ ಅಭಿನಯದ ಮುಂದಿನ ಸಿನಿಮಾಗಳು" | #Yash19

Yash Upcoming Movies: ಕೆಜಿಎಫ್ ಚಾಪ್ಟರ್ -೨ ಬಂದು ಇದು ವರೆಗೆ ಒಂದು ವರ್ಷ ೬ ತಿಂಗಳುಗಳೇ ಕಳೆದು ಹೋಗಿವೆ. ಯಶ್ ಅಭಿಮಾನಿಗಳಿಗೆ ಇದುವರೆಗೂ ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾದ ಅಪ್ಡೇಟ್ ಇದುವರೆಗೂ ಗೊತ್ತಾಗಿಲ್ಲ. ಸದಾ ಪರ್ಫೆಕ್ಷನ್ ಹಾಗು ಹೊಸತನ್ನು ನೀಡಲು ಬಯಸುವ ಯಶ್ ಈ ಬಾರಿ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್ -೨ ಗಿಂತ ದೊಡ್ಡ ಸಿನಿಮಾ ನೀಡಲು ಪಣ ತೊಟ್ಟಿದ್ದಾರೆ. 

ಇದುವರೆಗೂ ಯಶ್ ರವರು ಮುಂದಿನ ಸಿನಿಮಾದ ಬಗ್ಗೆ ಹಲವಾರು ಗಾಳಿ ಸುದ್ದಿಗಳು ಕೇಳಿಬಂದಿವೆ. ಆದರೆ ಸ್ವತಃ ಯಶ್ ರವರೆ ಹೇಳಿದಂತೆ ಎಲ್ಲಿಯವರೆಗೆ ತಾವು ಖುದ್ದಾಗಿ ಅನೌನ್ಸ್ ಮಾಡುವುದಿಲ್ಲವೋ ಅಲ್ಲಿಯವರೆಗೆ ಅವೆಲ್ಲ ಗಾಳಿ ಸುದ್ದಿಯೇ ಎಂದು ಹೇಳಿದ್ದಾರೆ.







ಯಶ್ - ನರ್ತನ್ ಕಾಂಬೋ | Yash - Director Narthan Movie

ಮಫ್ತಿ ಚಿತ್ರದ ನಂತರ ಬಹಳ ವರ್ಷಗಳ ಗ್ಯಾಪ್ ತೆಗೆದುಕೊಂಡಿದ್ದ ನಿರ್ದೇಶಕ ನರ್ತನ್ರವರು ಯಶ್ ಗೆ ಸಕ್ಕತ್ತಾದ ಕಥೆಯೊಂದನ್ನು ಬರೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಯಶ್ ಸಹ ನರ್ತನ್ ಗೆ ಕಥೆಯ ವಿಚಾರವಾಗಿ ಹಲವಾರು ಬಾರಿ ಭೇಟಿಯಾಗಿದ್ದಾರೆ ಎಂದು ಸಹ ಹೇಳಲಾಗಿತ್ತು. ಆದರೆ ಸದ್ಯ ಮಫ್ತಿಯ ಪ್ರಿಕ್ವೆಲ್ ಭೈರತಿ ರಣಗಲ್ ಚಿತ್ರದಲ್ಲಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವುದರಲ್ಲಿ ಬ್ಯುಸಿಯಾಗಿದ್ದಾರೆ.


ಯಶ್ - ಗೀತು ಮೋಹನ್ ದಾಸ್ ಕಾಂಬೋ | Yash - Director Geethu Mohandas Movie

ಮಲಯಾಳಂ ಭಾಷೆಯ ನಿರ್ದೇಶಕಿ ಗೀತು ಮೋಹನ್ ದಾಸ್ ನಟ ಯಶ್ ಅವರಿಗೆ ಇಷ್ಟವಾಗುವಂತ ಆಕ್ಷನ್ ಕಥೆಯೊಂದನ್ನು ಹೇಳಿದ್ದಾರಂತೆ. ಈ ಚಿತ್ರವು ಕೆ.ಜಿ.ಎಫ್ ತರಹದ ಪಿರಿಯಾಡಿಕ್ ಆಕ್ಷನ್ ಸಿನಿಮಾ ಆಗಿರಲಿದೆಯಂತೆ. ಗೋವಾದ ಡ್ರಗ್ಸ್ ಮಾಫಿಯಾದ ಕಥಾಹಂದರ ಹೊಂದಿರಲಿದೆ ಅಂತೆ. ಈ ಚಿತ್ರದಲ್ಲಿ ಯಶ್ ಅವರ ವಿರುದ್ಧ ಮಲಯಾಳಂ ನಟ tovino thomas ಅಭಿನಯಿಸಿಲಿದ್ದಾರೆ. ಈ ಚಿತ್ರವನ್ನು ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ ನಿರ್ಮಿಸುವ ಸಾಧ್ಯತೆ ಇದೆ. ಚಿತ್ರವನ್ನು Hollywood standards ನ ಪ್ರಕಾರ ನಿರ್ಮಿಸಲಿದ್ದಾರೆ. ಈ ಚಿತ್ರಕ್ಕೆ ಯಶ್ ರವರು hollywood na ಸಾಹಸ ನಿರ್ದೇಶಕ JJ Perry ಯವರು ಸಾಹಸ ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರದಲ್ಲಿ ನಟಿಯಾಗಿ ತೆಲುಗಿನ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬ ಮಾತುಗಳು ತುಂಬಾನೇ ಓಡಾಡ್ತು.




ಯಶ್ - S. ಶಂಕರ ಕಾಂಬೋ | Yash - Director S. Shankar Movie

ಇನ್ನು ಯಶ್ ಹೆಸರು ತಮಿಳಿನ ಖ್ಯಾತ ನಿರ್ದೇಶಕ, ಸೋಲೇ ಕಾಣದ ನಿರ್ದೇಶಕ S. ಶಂಕರ್ ಜೊತೆ ಸಿನಿಮಾವೊಂದನ್ನು ಮಾಡಲಿದ್ದಾರೆ ಹಾಗೂ ಆ ಚಿತ್ರವು ಸಾವಿರ ಕೋಟಿ ಬಡ್ಜೆಟ್ ನಲ್ಲಿ ಮೂಡಿಬರುವ ಮಾತಿದೆ. ಈ ಚಿತ್ರದಲ್ಲಿ ಬಹುತೇಕ ಚಿತ್ರವು ಗ್ರಾಫಿಕ್ ಆಗಿರಲಿದ್ದು, ನೀರಿನಲ್ಲಿ ಹೊಸದೊಂದು ಜಗತ್ತನ್ನು ಸೃಷ್ಟಿಸಲಿದ್ದರಾಂತೆ. ಆ ಚಿತ್ರದ ಹೆಸರು ""Velpari" ಎಂದು ಸಹ ಮಾತು ಕೇಳಿಬಂದಿತ್ತು. ಇದು ಎಷ್ಟರ ಮಟ್ಟಿಗೆ ನಿಜಾನೋ ಏನೋ ಸಮಯವೇ ಉತ್ತರಿಸಲಿದೆ.

ಯಶ್ - PS ಮಿತ್ರನ್ ಕಾಂಬೋ | Yash - Director PS Mithran Movie

S.Shankar ಅಷ್ಟೇ ಅಲ್ಲದೆ ಮತ್ತೊಬ್ಬ ತಮಿಳು ನಿರ್ದೇಶಕ PS ಮಿತ್ರನ್ ಜೊತೆಗೆ ಸಹ ಯಶ್ ಸಿನೆಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. PS ಮಿತ್ರನ್ ಅವರ ಹಿಂದಿನ ಸಿನೆಮಾ ಸರ್ದಾರ್ ಸಿನೆಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ನಟ ಕಾರ್ಥಿಯವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೂ ಈ ಚಿತ್ರದ ಪಾರ್ಟ್ 2 ಸಹ ಬರಲಿದೆ ಎಂದು ಚಿತ್ರದ ಕೊನೆಯ ಭಾಗದಲ್ಲಿ ತೋರಿಸಿದ್ದರು ಹಾಗೂ ನಿರ್ಮಾಣ ಸಂಸ್ಥೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಸದ್ಯ ಅವರು ಸರ್ದಾರ್ 2 ಚಿತ್ರದ ಕಥೆಯಲ್ಲಿ ಬಿಝಿ ಆಗಿರಬಹುದು.


ಯಶ್ - ನಿತೇಶ್ ತಿವಾರಿ ಕಾಂಬೋ | Yash as Ravana in Nitesh Tiwari's Ramayana Trilogy

Yash as Ravana: ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅವರು ಹಿಂದಿಯಲ್ಲಿ ಮೂರು ಭಾಗದಲ್ಲಿ ರಾಮಾಯಣ ವನ್ನು ಹೇಳ ಹೊರಟಿದ್ದಾರೆ. ಆ ಚಿತ್ರದಲ್ಲಿ ಯಶ್ ಅಭಿನಯಿಸುವ ಸಾಧ್ಯತೆ ಇದೆ. ರಾಮಾಯಣದಲ್ಲಿ ಬರುವ ಆಜಾನುಬಾಹು ಹತ್ತು ತಲೆಯ ಲಂಕಾಧಿಪತಿ ರಾವಣನ ಪಾತ್ರದಲ್ಲಿ ನಟಿಸಲು ಯಶ್ ಗೆ ಆಫರ್ ಬಂದಿದ್ಯಂತೆ. ಈ ಚಿತ್ರಕ್ಕಾಗಿ ಯಶ್ ರವರು ತಮ್ಮ ಪಾತ್ರದ ಶೂಟ್ ಮಾಡಲು 20 ದಿನಗಳ ಕಾಲಶೀಟ್ ನೀಡಿದ್ದಾರಂತೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಸೀತಾ ಮಾತೆ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಅಭಿನಯ ಮಾಡಲಿದ್ದಾರೆ.


ಯಶ್ - SS ರಾಜಮೌಳಿ ಕಾಂಬೋ | Yash as Ravana in Nitesh Tiwari's Ramayana Trilogy

ಇನ್ನು ಯಶ್ ಹೆಸರು ತೆಲುಗಿನ ಆಲ್ ಟೈಂ ದಿ ಬೆಸ್ಟ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಯಶ್ ಅವರನ್ನು ಮಹಾರಾಷ್ಟ್ರದ ಛತ್ರಪತಿ ಶಿವಾಜಿಯ ಕಥೆಯಲ್ಲಿ ಒಂದು ಸಿನೆಮಾ ಮಾಡಲಿದ್ದಾರೆ ಎಂದು ಯೂಟ್ಯೂಬ್ ನಲ್ಲಿ ಸುದ್ದಿಯಾಗಿದೆ. ಆದರೆ ಇದೆಲ್ಲ ಶುದ್ಧ ಸುಳ್ಳು ಅಂತಿದೆ ಗಾಂಧಿನಗರ. ತೆಲುಗು ಭಾಷೆ ಬಿಟ್ಟು ಬರದ ನಿರ್ದೇಶಕ, ಕನ್ನಡ ಭಾಷೆ ಬಿಟ್ಟು ಹೋಗದ ನಟ, ಇವರಿಬ್ಬರೂ ಸಿನೆಮಾ ಮಾಡುವುದು ಡೌಟೇ. ಈ ಚಿತ್ರದ ಫ್ಯಾನ್ ಮೆಡ್ ಪೋಸ್ಟರ್ ಸೋಷಿಯಲ್ ಮೀಡಿಯಾ ದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಪೋಸ್ಟರ್ ನಲ್ಲಿ ಯಶ್ ಅವರು ಶಿವಾಜಿ ವೇಷದಲ್ಲಿ ತೋರಿಸಲಾಗಿದೆ. 

ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.