.

Salaar Updates: "ಸಲಾರ್ ಚಿತ್ರದಿಂದ ಎರಡು ಬಿಗ್ ಅಪಡೇಟ್ಸ್! ಫ್ಯಾನ್ಸ್ ದಿಲ್ ಖುಷ್"

Salaar Update

Salaar-updates: ಯಶಸ್ವಿ ಬಾಹುಬಲಿ ಸರಣಿ ಚಿತ್ರದ ಖ್ಯಾತಿಯ ನಟ ಪ್ರಭಾಸ್ ರವರು ಬಾಹುಬಲಿ ನಂತರ ಮಡಿದ ಸಿನೆಮಾಗಳೆಲ್ಲ ಅಷ್ಟರ ಮಟ್ಟಿಗೆ ಪ್ರಭಾಸ್ ಅವ್ರಿಗೆ ಬ್ರೇಕ್ ತಂದು ಕೊಟ್ಟಿಲ್ಲ. ಸದ್ಯ ಅವರ ಕೈಯಲ್ಲಿ ಎರಡು ಸಿನೆಮಾಗಳಿವೆ. ಒಂದು ಪ್ರಶಾಂತ ನೀಲ್ ನಿರ್ದೇಶನದಲ್ಲಿ ಹಾಗು ಕನ್ನಡ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಜೊತೆಯಲ್ಲಿ ಬರುತ್ತಿರೋ ಸಲಾರ್ ಆದರೆ ಇನ್ನೊಂದು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಹಾಗು ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಸಿನಿಮಾಸ್ ಜೊತೆಗೆ ಬರುತ್ತಿರೋ ಕಲ್ಕಿ ಚಿತ್ರ.


ಆದರೆ ಇವತ್ತಿನ ಮಟ್ಟಿಗೆ ಜನರ ಮನಸ್ಸಿನಲ್ಲಿ ಕ್ರೇಜ್ ಹುಟ್ಟುಹಾಕಿದ ಸಿನಿಮಾ ಅಂದರೆ ಅದು ಪ್ರಶಾಂತ ನೀಲ್ ನಿರ್ದೇಶನದ ಸಲಾರ್: ದಿ ಸಿಸ್ಫೈರ್(Salaar : The  Ceasefire).  ಸಿಸ್ಫೈರ್/Ceasefire ಎಂದರೆ ಕದನ ವಿರಾಮ ಎಂದರ್ಥ. ಯಾರ ವಿರುದ್ಧ ಕದನ? ಯಾಕೆ ಕದನದಲ್ಲಿ ವಿರಾಮ? ಈ ಎಲ್ಲ ವಿಷಯಗಳನ್ನ ನಾವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಸದ್ಯ ಕೆಜಿಎಫ್ ಚಾಪ್ಟರ್ ೧ ಮತ್ತು ಕೆಜಿಎಫ್ ಚಾಪ್ಟರ್ ೨, ಎರಡರಲ್ಲೂ ಜಯಭೇರಿ ಬಾರಿಸಿರುವ ನಿರ್ದೇಶಕ ಪ್ರಶಾಂತ ನೀಲ್ ಹಾಗು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ದ ಕಾಂಬೋದ ಸಿನಿಮಾ ಸಲಾರ್: ದಿ ಸಿಸ್ಫೈರ್(Salaar : The  Ceasefire) ಮೇಲೆ ಪ್ರಭಾಸ್ ಅಭಿಮಾನಿಗಳಷ್ಟೇ ಅಲ್ಲದೇ ಏಡಿ ಭರತ್ ಚಿತ್ರರಂಗವೇ ಎದುರು ನೋಡುತ್ತಿದೆ. ಈ ಸಲಾರ್ ಚಿತ್ರ ಎರಡು ಭಾಗಲ್ಲಿ ರಿಲೀಸ್ ಆಗಲಿದ್ದು, ಎರಡನೇ ಭಾಗ ಯಾವಾಗ ಬರುತ್ತದೆ ಎಂದು ಎಲ್ಲಿಯೂ ಸುದ್ದಿ ತಿಳಿದು ಬಂದಿಲ್ಲ.

ಈಗ ಬರ್ತಾ ಇರೋ ಇನ್ಸೈಡ್ ನ್ಯೂಸ್ ಪ್ರಕಾರ Salaar Update ಏನೆಂದರೆ ಸಾಲಾರ್ ಚಿತ್ರ ತಂಡವು ಎರಡು ಟ್ರೈಲರ್ ಬಿಡುಗಡೆ ಮಾಡಲಿದೆಯಂತೆ. ಒಂದು ಅಕ್ಟೋಬರ್ 23ರಂದು, ಅಂದು ನಟ ಪ್ರಭಾಸ್ ರವರ ಹುಟ್ಟು ಹಬ್ಬದ ವಿಶೇಷ ದಿನದ ಪ್ರಯುಕ್ತವಾಗಿ ಮೊದಲನೇ ಟ್ರೈಲರ್ ರಿಲೀಸ್ ಆಗಲಿದೆಯಂತೆ. ಮತ್ತು ಇನ್ನೊಂದು ಟ್ರೈಲರ್ ಡಿಸೆಂಬರ್ ತಿಂಗಳ ಮೊದಲನೇ ವಾರಾಂತ್ಯದಲ್ಲಿ ಬರಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.


ಎಲ್ಲವು ಅಂದುಕೊಂಡಂತೆ ಆಗಿದ್ದರೆ ಸಲಾರ್ ಚಿತ್ರವು ಸೆಪ್ಟೆಂಬರ್ ೨೮ರಂದು ತೆರೆಗಪ್ಪಳಿಸಬೇಕಿತ್ತು. ಆದರೆ ಈಗ ತಡವಾಗಿ ಬರಬೇಕಾಗಿದೆ. ಈಗ ಸಲಾರ್ ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದೇ ದಿನ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ Dunki ಸಿನಿಮಾ ಸಹ ರಿಲೀಸ್ ಆಗಲಿದೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಸೋಲೇ ಕಾಣದ ನಿರ್ದೇಶಕ ರಾಜಕುಮಾರ್ ಹಿರಾನಿ ಹೊತ್ತಿದ್ದಾರೆ. ನಿರ್ದೇಶಕ ರಾಜಕುಮಾರ್ ಹಿರಾನಿ ನಿರ್ದೇಶಿಸಿದ ಚಿತ್ರಗಳೆಲ್ಲ ಬ್ಲಾಕ್ಬಸ್ಟರ್ ಹಿಟ್ಗಳು. ಪ್ರಶಾಂತ್ ನೀಲ್ ಸಹ ಮಾಡಿದ್ ಮೂರು ಸಿನೆಮಾಗಳೆಲ್ಲ ಹಿಟ್ ಆಗಿವೆ. ಈ ವರ್ಷದ ಡಿಸೆಂಬರ್ 22 ರಂದು ಇಬ್ಬರು ಮದಗಜಗಳ ಸೆಣಸಾಟ ಜೋರಾಗಿಯೇ ಇರಲಿದೆ. ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಅನ್ನೋದನ್ನ ಕಾಡು ನೋಡಬೇಕಾಗಿದೆ.


ಬುಕಮೈಶೋನ ಪ್ರಕಾರ ಸಲಾರ್ ಚಿತ್ರಕ್ಕೆ 367.5K ಇಂಟ್ರೆಸ್ಟ್ಗಳು ಬಂದಿದೆ. ಹಾಗು Dunki ಚಿತ್ರಕ್ಕೆ 83K ಇಂಟ್ರೆಸ್ಟ್ಗಳು ಬಂದಿದೆ.

ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.