Yash as Ravana in Ramayana:"ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ ಯಶ್" | #Yash19 | Yash | Ranbir Kapoor | Ramayana Trilogy
Yash as Ravana in Ramayana
ನಟ ಯಶ್:- ಕಳೆದ ವರ್ಷ ಏಪ್ರಿಲ್ ೧೪ ರಂದು ತೆರೆಕಂಡ ಕೆಜಿಎಫ್ ಚಿತ್ರದ ಬಳಿಕ ನಟ ಯಶ್ ಯಾವ ಚಿತ್ರ ಕೈಗೆತ್ತುಕೊಳ್ಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಇಡೀ ಭಾರತದ ಚಿತ್ರರಂಗವೇ ಕಾದು ಕೂತಿದೆ. ಆದರೆ ನಟ ಯಶ್ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೆ, ಸದ್ದಿಲ್ಲದೇ ತಮ್ಮ ಮುಂದಿನ ಚಿತ್ರದ ಪ್ರಿ-ಪ್ರೊಡಕ್ಷನ್ ಹಂತದ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ನಟ ಯಶ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆ ಮೇಲೆ ನೋಡಲು ಬಕ ಪಕ್ಷಿಯಂತೆ ಕಾಡು ಕುಳಿತಿದ್ದಾರೆ. ಅವರ ಅಭಿಮಾನಿಗಳು ಯಶ್ ಅವರಿಂದ ಕೇವಲ ನಿರ್ದೇಶಕರ ಹೆಸರನ್ನು ಅಷ್ಟೇ ಸದ್ದ್ಯಕ್ಕೆ ಬಯಸುತ್ತಿದ್ದಾರೆ. ಅಭಿಮಾನಿಗಳಿಗೆ ಅವರ ಮೇಲೆ ಅಪಾರವಾದ ನಂಬಿಕೆ ಇದೆ. ಅವರು ಲೇಟ ಆಗಿ ಬಂದರು ಎಲ್ಲರಿಗಿಂತ ಲೇಟೆಸ್ಟ್ ಆಗಿಯೇ ಬರುತ್ತಾರೆಂದು ನಂಬಿಕೆ.
ಇದುವರೆಗೂ ಯಶ್ ಅವರ ಮುಂದಿನ ಚಿತ್ರ ಇವರು ನಿರ್ದೇಶಿಸಲಿದ್ದಾರೆ, ಅವರು ನಿರ್ದೇಶಿಸಲಿದ್ದಾರೆ ಎಂದು ಚಿತ್ರರಂಗದಲ್ಲಿ ಹಲವಾರು ಗಾಸ್ಸಿಪ್ಗಳು. ಬಹಳಷ್ಟು ದಿನಗಳ ಕಾಲ ನಟ ಯಶ್ರವರು ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂದು ಗಾಳಿಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ತಮಿಳಿನ ಸ್ಟಾರ್ ಡೈರೆಕ್ಟರ್ S. ಶಂಕರ್ ಹಾಗು ಪಿ.ಎಸ. ಮಿತ್ರನ್ ಹೆಸರು ಕೇಳಿಬಂದಿತ್ತು.
ಅಲ್ಲದೆ ಮಲಯಾಳಂ ನ ಸ್ಟಾರ್ ನಟ ಹಾಗು ನಿರ್ದೇಶಕ ಹಾಗು ಪ್ರೊಡ್ಯೂಸರ್ ಸಹ ಆಗಿರುವ ಪೃಥ್ವಿರಾಜ್ ಸುಕುಮಾರನ್ ರವರು ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಕೇಳಿ ಬಂದಿತ್ತು. ಇದರ ಜೊತೆಗೆ ಮಲಯಾಳಂನ ನಿರ್ದೇಶಕಿ ಗೀತು ಮೋಹನದಾಸ ಜೊತೆಗೆ ಯಶ್ ರವರ ಮುಂದಿನ ಚಿತ್ರ #Yash19 ಸೆಟ್ಟೇರಲಿದೆ ಎಂದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ.
ಇತ್ತ ಕನ್ನಡದಲ್ಲಿ ನಿರ್ದೇಶಕ ನರ್ತನ್ ಹೆಸರಿನ ಜೊತೆಗೆ ಇತ್ತೀಚಿಗೆ ಯಶ್ ರವರು ಪ್ರಶಾಂತ ನೀಲ್ ಜೊತೆ ಮತ್ತೆ ಕೆಜಿಎಫ್ -ಚಾಪ್ಟರ್ 3 ಮಾಡಲಿದ್ದಾರೆ ಎಂದು ಗಾಂಧಿನಗರದಲ್ಲಿ ಜೋರಾಗಿ ಸದ್ದು ಕೇಳಿ ಬಂದಿತ್ತು.
ಇದೀಗ ಬರುತ್ತಿರುವ ರೂಮರ್ಸ್ ಪ್ರಕಾರ ನಟ ಯಶ್ ರವರು ಹಿಂದಿಯ ಖ್ಯಾತ ಚಿತ್ರ ಅಮಿರ್ ಖಾನ್ ನಟನೆಯ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ರವರ ಮುಂದಿನ ಚಿತ್ರ ರಾಮಾಯಣ trilogy ಯ ಮೊದಲ ಭಾಗದಲ್ಲಿ ನಟ ಯಶ್ ರವರು ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸಲಿದ್ದು, ಸೀತ ಮಾತೆಯ ಪಾತ್ರದಲ್ಲಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೇಳಲ್ಪಡುತ್ತಿದೆ. ಈ ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆಯಂತೆ. ನಟ ಯಶ್ ಈ ಚಿತ್ರಕ್ಕಾಗಿ 20 ದಿನಗಳ ಕಾಲ್ ಶೀಟ್ ಸಹ ನಿರ್ದೇಶಕರಿಗೆ ನೀಡಿದ್ದಾರಂತೆ.
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.