"ಕನ್ನಡಿಗರು ಆಚೆ ಕಳಿಸಿದ್ರು. ತೆಲುಗಿನವರು ನಿನ್ನ ಸಿನಿಮಾ ಯಾರು ನೋಡಲ್ಲ ಅಂದ್ರು": ನಟ ಸಿದ್ದಾರ್ಥ್ ಭಾವುಕ😓
ನಟ ಸಿದ್ದಾರ್ಥ್ ಬೇಸರ: ತಮಿಳು ಭಾಷೆಯ ನಟ ಸಿದ್ದಾರ್ಥ್ ರವರು ದಕ್ಷಿಣ ಭಾರತಾದ ಖ್ಯಾತ ನಟರಲ್ಲೊಬ್ಬರು. ಮೊದಲೆಲ್ಲ ಅವರ ಹಲವು ಸಿನಿಮಾಗಳು ಭಾರಿ ಮಟ್ಟದ ಯಶಸ್ಸನ್ನು ಗಳಿಸುತ್ತಿದ್ದವು, ಆದರೆ ಇತ್ತೀಚಿಗೆ ಅವರು ಸಾಲು ಸಾಲು ಸೋಲನ್ನು ಅನುಭವಿಸುತ್ತಿದ್ದಾರೆ. ಸದ್ಯ ಅವರು ನಟಿಸಿ ನಿರ್ಮಿಸಿರುವಂತಹ ಚಿತ್ತ(ತಮಿಳು) ಚಿತ್ರವನ್ನು ಕನ್ನಡ ಹಾಗು ತೆಲುಗಿನಲ್ಲಿ ಅನುವಾದ ಮಾಡಿ 28ನೇ ಸೆಪ್ಟೆಂಬರ್ ಗೆ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಈ ಚಿತ್ರ "ಚಿಕ್ಕು" ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದ್ದು ಕನ್ನಡಲ್ಲಿ ಅವರ ಪಾತ್ರಕ್ಕೆ ಸ್ವತಃ ನಟ ಸಿದ್ಧಾರ್ಥರವರೇ ಡಬ್ ಮಾಡಿದ್ದಾರೆ. ಚಿತ್ರದ ಡಬ್ಬಿಂಗಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ದಿನಗಳ ಹಿಂದಷ್ಟೇ ಈ ಚಿತ್ರದ ಟೀಸರ್ ಹಾಗು ಟ್ರೈಲರ್ ಬಿಡುಗಡೆ ಯಾಗಿದ್ದು ನೋಡಿದ ವೀಕ್ಷಕರೆಲ್ಲ ಮೆಚ್ಚುಗೆಯ ಮಾತುಗಳಾಡಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ತಮ್ಮ ಚಿಕ್ಕು ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದಗೆ ಪತ್ರಿಕಾ ಮಿತ್ರರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದರು. ಆವಾಗ ಬೆಂಗಳೂರಿನಲ್ಲಿ ಕಾವೇರಿ ಜಲ ವಿವಾದದ ಸಮಸ್ಯೆ ಉಲ್ಬಣ ಗೊಂಡಿತ್ತು. ಕೆಲವು ಕಾವೇರಿ ಪರ ಹೋರಾಟಗಾರರು ಹಾಗು ಕರವೇ ಸ್ವಾಭಿಮಾನಿ ಸೇವೆ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಯುವಾಗ ಮದ್ಯ ಸ್ಥಳಕ್ಕೆ ಬಂದು ನಟ ಸಿದ್ದಾರ್ಥ್ರನ್ನು ತರಾಟೆಗೆ ತೆಗೆದುಕೊಂಡು ಅವ್ರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅದಾದ ನಂತರ ಸ್ವತಃ ನಟ ಸಿದ್ದಾರ್ಥ್ ರವರೆ ಖುದ್ದಾಗಿ ಅಲ್ಲಿಂದ ಹೊರನಡೆದು ಹೋಗಿದ್ದಾರೆ.
ಇದಾದ ಬಳಿಕ ಕನ್ನಡ ಚಿತ್ರರಂಗದ ಗಣ್ಯರೆಲ್ಲ ಕಾವೇರಿ ಜಲ ಸಮಸ್ಯೆಯ ವಿರುದ್ಧ ಮಡಿದ ಪ್ರತಿಭಟನಾ ಸಭೆಯಲ್ಲಿ ಕನ್ನಡ ಚಿತ್ರರಂಗದ ಸದ್ಯದ ಲೀಡರ್ ನಟ ಶಿವಣ್ಣರವರು ನಟ ಸಿದ್ದಾರ್ಥ್ ರಿಗೆ ಕನ್ನಡ ಚಿತ್ರರಂಗದ ಪರವಾಗಿ ಸಾರೀ ಹೇಳಿದರು ಹಾಗು ಈಥರಹದ ತಪ್ಪು ಮುಂದೆಂದೂ ಆಗುವುದಿಲ್ಲ ಎಂದು ಹೇಳಿದರು. ಇದೆ ರೀತಿ ತೆಲುಗು ಭಾಷೆಯಲ್ಲಿ ಸುದ್ದಿಘೋಷ್ಠಿ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳ ಮೆಲುಕು ಹಾಕಿ ಭಾವುಕರಾಗಿದ್ದಾರೆ. ತಮಗಾದ ನೋವುಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ.
ವೇದಿಕೆಯಲ್ಲಿ ಮಾತನಾಡುವಾಗ "ಈ ಚಿತ್ರವನ್ನು ನಾನು ಕನ್ನಡದಲ್ಲಿ ಕೆಜಿಎಫ್ ಚಿತ್ರದ ಸಹ ನಿರ್ಮಾಪಕರಿಗೆ ತೋರಿಸಿದೆ, ಅವರು ನಾವು ಇಂತಹ ಸಿನಿಮಾ ಇದುವರೆಗೆ ನೋಡಿಯೇ ಇಲ್ಲ ಎಂದರು. ಅದೇ ರೀತಿ ತಮಿಳಿನಲ್ಲಿ ಖ್ಯಾತ ಫಿಲಂ ಬ್ಯಾನರ ರೆಡ್ ಜಯಂಟ್ ಸಂಸ್ಥೆಯವರು ನೋಡಿ ಇಂತಹ ಚಿತ್ರ ನಾನು ನೋಡಿಯೇ ಇಲ್ಲ ಎಂದರು. ಹಾಗೆ ಕೇರಳದಲ್ಲಿ ನಂಬರ್ ಒನ್ ನಿರ್ಮಾಪಕ ಗೋಕುಲಂ ಗೋಪಾಲಂ ಚಿತ್ರವನ್ನು ನೋಡಿ, ಇಷ್ಟ ಆದ ಮೇಲೆ ಖರೀದಿಸಿದ್ದಾರೆ" ಎಂದು ಹೇಳಿ ನಟ ಸಿದ್ದಾರ್ಥ್ ಸುಮ್ಮನಾದರು.
"ಫಸ್ಟ್ ಟೈಮ್ ನಾನು ಚಿತ್ರಕ್ಕಾಗಿ ಕನ್ನಡ ಕಲಿತು ಸ್ವತಃ ನಾನೇ ಖುದ್ದಾಗಿ ಕನ್ನಡದ ಅವತರಣಿಕೆಯ ಡಬ್ಬಿಂಗ್ ಮಾಡಿದೆ. ದಕ್ಷಿಣ ಭಾರತದ 4 ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ರಿಲೀಸ್ ಮಾಡೋಣ ಅಂತ ಹೋದರೆ ಕರ್ನಾಟಕದಲ್ಲಿ ನೀನು ತಮಿಳಿನವನು ಇಲ್ಲಿಂದ ಹೊರಗೆ ನಡಿಯೆಂದು ನನ್ನನ್ನು ಆಚೆಗೆ ಕಳುಹಿಸಿದರು. ಇದಕ್ಕೆ ಸಾಕಷ್ಟು ಜನ ಸ್ವಾರಿ, ಥ್ಯಾಂಕ್ಯು ಹೇಳಿದರು. ನಾನು ಅಲ್ಲಿಂದ ಸುಮ್ಮನಾಏ ನಕ್ಕು ಹೊರಬಂದೆ."
"ಅವತ್ತು ನನಗೆ ಒಬ್ಬ ನಟನಾಗಿ ಹಾಗು ನಿರ್ಮಾಪಕನಾಗಿ ನನ್ನ ಸಿನಿಮಾದ ಬಗ್ಗೆ ಪತ್ರಿಕೆಯವರ ಮುಂದೆ ಮಾತನಾಡಲಾಗಲಿಲ್ಲ ಎಂದು ಬೇಸರವಾದೆ. ಇನ್ನು ತೆಲುಗಿನ ವಿಚಾರಕ್ಕೆ ಬಂದರೆ ಎಳ್ಳಿನ ಜನ ಸಿದ್ದಾರ್ಥ್ ಆ, ಅವನ ಸಿನಿಮಾ ಯಾರು ನೋಡ್ತಾರೆ? ಯಾಕೆ ನೋಡ್ತಾರೆ? ಎಂದರು. ಸಿನೆಮಾ ಚೆನಾಗಿದ್ದರೆ ಪ್ರೇಕ್ಷಕರು ಸಿನಿಮಾ ನೋಡೇ ನೋಡುತ್ತಾರೆ ಎಂದೆ. ನನಗೆ 28ರಂದು ಬಿಡುಗಡೆಯಾಗುತಿಯಿರುವ ಸಿನೆಮಾಗೆ ಸರಿಯಾಗಿ ಚಿತ್ರಮಂದಿರಗಳು ಸಿಗಲಿಲ್ಲ. ಈ ವಿಷಯವಾಗಿ ನಾನು ಬೇಸರಗೊಂಡಿದ್ದೆ. ಆಗ ನನ್ನ ಬೆನ್ನ ಹಿಂದೆ ನಿಂತಿದ್ದು ತೆಲುಗಿನ ಏಷ್ಯನ್ ಸುನಿಲ್ ರವರು ನನ್ನ ಪರವಾಗಿ ನಿಂತರು. ಅವರು ನನ್ನ ಬಳಿ ಬಂದು ನಾನು ನಿಮ್ಮೊಂದಿಗೆ ಇದ್ದೇನೆ ಎಂದು ನನ್ನ ಚಿತ್ರ ಖರಿಸಿದರು."
"ಈ ಚಿತ್ರಕ್ಕಿಂತ ಉತ್ತಮ ಸಿನಿಮಾ ನನ್ನಿಂದ ಮಾಡಲು ಸಾಧ್ಯವಿಲ್ಲ. ನಿಮಗೆ ಸಿನಿಮಾದಲ್ಲಿ ನಂಬಿಕೆ ಇದ್ದರೆ, ಸಿನಿಮಾ ಇಷ್ಟವಿದ್ದರೆ ಥಿಯೇಟರ್‌ಗೆ ಹೋಗಿ ಈ ಸಿನಿಮಾ ನೋಡಿ. ಈ ಸಿನಿಮಾ ನೋಡಿ ನಾವು ತೆಲುಗಿನಲ್ಲಿ ಸಿದ್ಧಾರ್ಥನ ಸಿನಿಮಾ ನೋಡಲ್ಲ ಅಂತ ಅನಿಸಿದರೆ ಇನ್ಮುಂದೆ ಅಂತಹ ಪ್ರೆಸ್ ಮೀಟ್ ಮಾಡುವುದಿಲ್ಲ. ನಾನು ಇಲ್ಲಿಗೆ ಬರುವುದಿಲ್ಲ" ಎಂದು ವೇದಿಕೆಯಲ್ಲೇ ಸಿದ್ಧಾರ್ಥ್ ಅಳಲು ತೋಡಿಕೊಂಡರು.
ಚಿತ್ರದ ಬಗ್ಗೆ ಮಾತನಾಡುತ್ತ ಅವರು "ಚಿಕ್ಕು ಚಿತ್ರಕ್ಕಿಂತ ಉತ್ತಮ ಸಿನಿಮಾ ಮಾಡಲು ನನ್ನಿಂದ ಸಾಧ್ಯವಿಲ್ಲ. ಇದು ನನ್ನ ವೃತ್ತಿ ಜೀವನದ ಅತ್ಯಂತ ಇಷ್ಟವಾದ ಸಿನಿಮಾ. ಇದನ್ನು ನನ್ನ ಸಿನಿಮಾ ಅಂತ ಅಲ್ಲ , ಒಂದು ಎಲ್ಲೇ ಸಿನಿಮಾ ಅಂತ ಅನ್ನಿಸಿದರೆ ಹೋಗಿ ನೋಡಿ. ಒಂದುವೇಳೆ ನಿಮಗೆ ಸಿದ್ದಾರ್ಥ್ ನೋಡಲ್ಲ ಅಥವಾ ನೋಡಬಾರ್ದು ಅಂತ ಅನಿಸಿದರೆ ಇನ್ನುಮನದೇ ಇಲ್ಲೇ ಪ್ರೆಸ್ ಮೀಟ್ ಮಾಡುವುದಿಲ್ಲ ಮತ್ತು ಇಲ್ಲಿಗೆ ಬರುವುದಿಲ್ಲ." ಎಂದು ಮಾತನಾಡುತ್ತ ಭಾವುಕರಾಗಿದ್ದಾರೆ.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.