SSP Scholarship 2023-24: SSP Scholarship ಎಲ್ಲಿ ಹಾಕಬೇಕು? ಕೊನೆಯ ದಿನಾಂಕ? ಯಾರಿಗೆ?
ಯಾರೆಲ್ಲ ತರಗತಿ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು?
ಗೆಳೆಯರೇ, ಪ್ರಸ್ತುತ ಈಗ ಸ್ಕಾಲರ್ಶಿಪ್ ಅರ್ಜಿ ಹಾಕಲು ಕೇವಲ ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು, ಅಂದರೆ 1 ರಿಂದ 10ನೆ ತರಗತಿಯ ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಎಲ್ಲ ಈ ವಿದ್ಯಾರ್ಥಿ ವೇತನವನ್ನು ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಹಾಕಲು ಏನೇನು ಬೇಕು?
ಕರ್ನಾಟಕದ ಸರ್ಕಾರದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲ ಪ್ರಮುಖ ಡಾಕ್ಯುಮೆಂಟ್ಗಳು/ದಾಖಲಾತಿಗಳು ಬೇಕಾಗಲಿವೆ.
ಬೇಕಾದ ದಾಖಲಾತಿಗಳು:-
ವಿದ್ಯಾರ್ಥಿಗಳ S.A.T.S. ID ಸಂಖ್ಯೆ.
ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ EID ಸಂಖ್ಯೆ.
ಮೊಬೈಲ್ ನಂಬರ್.
ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು.
ಕೊನೆಯ ದಿನಾಂಕ ಯಾವಾಗ?
ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಲು ಕೆಲವೊಂದು ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಇಲ್ಲಿ ಬೇರೆ ಡಿಪಾರ್ಟ್ಮೆಂಟ್ಗಳ ಮೇಲೆ ಹಾಗು ಜಾತಿ ಆಧಾರದ ಮೇಲೆ, ಆದಾಯದ ಮೇಲೆ ದಿನಾಂಕಗಳು ನಿಮಗೆ ಅಪ್ಲೈ ಆಗ್ತವೆ.
ಸೋಶಿಯಲ್ ವೆಲ್ಫೇರ್ ಡಿಪಾರ್ಟ್ಮೆಂಟ್, ಟ್ರೈಬಲ್ ವೆಲ್ಫೇರ್ ಡಿಪಾರ್ಟ್ಮೆಂಟ್, ಬ್ಯಾಕ್ವಾರ್ಡ್ ಕ್ಲಾಸ್ ಡಿಪಾರ್ಟ್ಮೆಂಟ್, ಡಿಪಾರ್ಟ್ಮೆಂಟ್ ಆಫ್ ಮೈನಾರಿಟಿ, ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್, ಸೈನಿಕ್ ವೆಲ್ಫೇರ್ ಡಿಪಾರ್ಟ್ಮೆಂಟ್, ಡಿಸೇಬಿಲಿಟಿ ವೆಲ್ಫೇರ್ ಡಿಪಾರ್ಟ್ಮೆಂಟ್ ಈ ಎಲ್ಲ ಡಿಪಾರ್ಟ್ಮೆಂಟ್ ಕೆಳಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ 20/10/2023 ಎಂದು ನಿಗದಿ ಮಾಡಲಾಗಿದೆ. ಮೇಲಿನ ಎಲ್ಲ ಡಿಪಾರ್ಟ್ಮೆಂಟ್ ಗಳ ಕಡೆಯಿಂದ ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಲು ಕರೆಯಲಾಗಿದೆ.
ಅರ್ಜಿ ಹಾಕುವ ವೆಬ್ ಸೈಟ್?
ಹಾಗಾದರೆ ನೀವು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿ ನೀವಾಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ.
ಈ ಕೆಳಗೆ ಹಾಕಿರುವ ಕರ್ನಾಟಕದ ಸರ್ಕಾರದ ಅಧಿಕೃತ ವೆಬ್ ಸೈಟ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೋಮಪೇಜ್ :- https://ssp.karnataka.gov.in/ssp2324/
ವಿದ್ಯಾರ್ಥಿ ಅಕೌಂಟ್ ರೆಜಿಸ್ಟರ್ ಮಾಡಲು:- https://ssp.karnataka.gov.in/ssp2324/homenew.aspx
ಕರ್ನಾಟಕ ಎಲ್ಲ ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು ಕೊನೆಯ ದಿನದ ಒಳಗಾಗಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಿ. ಧನ್ಯವಾದಗಳು.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.