.

ಇನ್ಮುಂದೆ ನಾಟಕ ಮಾಡಿದ್ರೆ ಸೂಲಿಬೆಲೆಗೆ ಜೈಲೇ ಗತಿ ಎಂದ MB ಪಾಟೀಲ್ | MB Patil warns chakravarthy suliebele



ಇನ್ಮುಂದೆ ನಾಟಕ ಮಾಡಿದ್ರೆ ಸೂಲಿಬೆಲೆಗೆ ಜೈಲೇ ಗತಿ ಎಂದ MB ಪಾಟೀಲ್ | MB Patil warns chakravarthy suliebele

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಚಕ್ರವರ್ತಿಯವರು ಕಾಂಗ್ರೆಸ್ ವಿರುದ್ಧ ಯಾವಾಗಲು ನೆಗೆಟಿವ್ ಹೇಳಿಕೆ ಕೊಡುತ್ತಲೇ ಇದ್ದರು. ಇತ್ತೀಚಿಗಷ್ಟೇ (ಸಾವರ್ಕರ್ ಜಯಂತಿಯಂದು) ಅವರು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಕೆಲ ದಿನದ ಬಳಿಕ ಚಕ್ರವರ್ತಿ ಸೂಲಿಬೆಲೆಯವರು ಸಾವರ್ಕರ ಜಯಂತಿಯ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡುವಾಗ "ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಬಂದಿದೆ". "ಸಾವರ್ಕರ್ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಭಯ" ಎಂದು ಕಾಂಗ್ರೆಸ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 



ಮೈಸೂರು ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ । Savarkar Samman Award

ಮೈಸೂರಿನಲ್ಲಿ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಸಾಹಿತಿ ಎಸ್. ಎಲ್. ಭೈರಪ್ಪ ಹಾಗು ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರಮುಖ ಆಹ್ವಾನಿತರಾಗಿದ್ದರು. ವಿಕ್ರಂ ಸಂಪತ್ ಅವರು ಈ ಪ್ರಶಸ್ತಿ ಭಾಜನರಾದರು.




ಚಕ್ರವರ್ತಿ ಸೂಲಿಬೆಲೆ ಅವರ ಹೇಳಿಕೆ

"ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ಸಾವರ್ಕರ್ ಜಯಂತಿ ರದ್ದು ಮಾಡೋಕೆ ಹೊರಟಿದೆ ", "ಮೋದಿ ವಿರುದ್ಧ ಮಾತಾಡ್ತಾರೆ", ಮತ್ತು "ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಬಂದಿದೆ" ಎಂದು ಕಾರ್ಯಕ್ರಮದಲ್ಲಿ ಆಕ್ರೋಶವನ್ನು ಹೊರಹಾಕಿದರು. ಇದಕ್ಕೆ ಶಾಸಕ ಹಾಗು ಸಚಿವ ಎಂ. ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. 



ಎಂ. ಬಿ. ಪಾಟೀಲ್ ಪ್ರತಿಕ್ರಿಯೆ/ಪ್ರತ್ಯುತ್ತರ

ವಿಜಯಪುರದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಮಾತಿಗೆ ಉತ್ತರ ನೀಡುವಾಗ ಪಾಟೀಲ್ ರವರು ಸೂಲಿಬೆಲೆ ಅಂತ ಅನ್ನುವ ಬದಲು "ಸೂಳೆಬೆಲೆ" ಅಂತ ಬಾರಿ ಬಾರಿ ಅಂದಿದ್ದು ಸೂಲಿಬೆಲೆ ಮತ್ತು ಅವರ ಆಪ್ತರಿಗೆ ತುಂಬಾ ಬೇಸರವಾಗಿದೆ ಮತ್ತು ಅವರೆಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. 

ಅಷ್ಟೇ ಅಲ್ಲದೆ "ನಾಲ್ಕು ವರ್ಷ ಸೂಲಿಬೆಲೆ ಏನು ಮಾಡಿದ್ದಾರೆ ಕೇಳಿ, ಸೂಲಿಬೆಲೆ ಮಡಿದ ಅನಾಹುತಗಳನ್ನು ನಾವು ಈಗ ಸರಿಪಡಿಸುತ್ತಿದ್ದೇವೆ". "ಪಥ್ಯ ಪುಸ್ತಕ ಇರ್ಬೋದು, ಹಿಜಾಬಾ, ಹಲಾಲ್,ಅಜಾನ್ ನಂತಹ ಏನೇನು ಕೆಲಸ ಮಾಡಿದ್ದಿರೋ, ಇದಕ್ಕೆಲ್ಲ ಒಂದು ಇತಿಶ್ರೀ ಹಾಡುತ್ತೇವೆ" ಎಂದು ಪ್ರತಿಕ್ರಿಯಿಸಿದ್ದಾರೆ.


ಪಠ್ಯಕ್ರಮ ಬದಲಾವಣೆ

ಮತ್ತೆ ಕಾಂಗ್ರೆಸ್ ಸರ್ಕಾರ ಹಿಂದಿನ ಪಠ್ಯಕ್ರಮ ಗಳನ್ನೂ ಚೇಂಜ್ ಮಾಡುವ ಉದ್ದೇಶ ಹೊಂದಿದೆ. ಅದರಲ್ಲೂ ಚಕ್ರವರ್ತಿ ಯವರು ಬರೆದಿರುವ ಭಾಗವನ್ನು ಸಂಪೂರ್ಣ ಅಳಿಸಿ ಹಾಕುವುದು ಗ್ಯಾರಂಟಿಯಾಗಿದೆ. ಮತ್ತೆ ಒಂದು ವೇಳೆ ಇದರ ವಿರುದ್ಧ ಹೋರಾಟ ಅಥವಾ ಗಲಾಟೆ ಮಾಡಿದ್ರೆ ಜೈಲು ಗ್ಯಾರಂಟಿ ಹುಷಾರ ಎಂಬ ಎಚ್ಚರಿಕೆ ನೀಡಲಾಗಿದೆ. ನಂಜೇಗೌಡ - ಉರಿಗೌಡ ಎಲ್ಲವನ್ನು ತೆಗೆದು ಹಾಕ್ತೇವೆ ಎಂದು ಹೇಳಿಕೆ ನೀಡಲಾಗಿದೆ. 

ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.