ಬಾಹುಬಲಿ ವಿರುದ್ಧ ತೊಡೆ ತಟ್ಟತಾರಾ ಕಮಲ್ ಹಾಸನ್? Prabhas vs Kamal Hassan Faceoff
Prabhas VS Kamal Hassan!?
ಹೈದರಾಬಾದ್: ಬಾಹುಬಲಿ ಖ್ಯಾತಿಯ ನಟ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಮುಂದಿನ 10 ತಿಂಗಳಲ್ಲಿ ಒಟ್ಟು ಬ್ಯಾಕ್ ಟು ಬ್ಯಾಕ್ ೩ ಪಾನ್ ಇಂಡಿಯಾ ಚಿತ್ರಗಳನ್ನು ಅವರ ಅಭಿಮಾನಿಗಳಿಗೆ ನೀಡಲಿದ್ದಾರೆ. ಜೂನ್ ತಿಂಗಳ 16ನೇ ತಾರೀಖಿನಂದು ಬಾಲಿವುಡ್ ಮೂಲದ ಓಂ ರೌತ್ ನಿರ್ದೇಶನದಲ್ಲಿ ಮೂಡಿಬಂದ ಆದಿಪುರುಷ ಚಿತ್ರ ಬಿಡುಗಡೆ ಯಾಗಲಿದೆ. ಮತ್ತು ಸೆಪ್ಟೆಂಬರ್ 28ರಂದು ಕನ್ನಡದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರ ನಿರ್ದೇಶನದ SALAAR ಚಿತ್ರ ತೆರೆಗಪ್ಪಳಿಸಲಿದೆ. ಮತ್ತು ಅದಾದ ಬಳಿಕ ಜನವರಿ 12ರಂದು ನಿರ್ದೇಶಕ ನಾಗ್ ಅಶ್ವಿನ್ ರವರ ಇನ್ನೂ ಹೆಸರಿಡದ(ಸದ್ಯದ ಮಟ್ಟಿಗೆ Project-K ಎಂಬ ಹೆಸರು) ಚಿತ್ರ ರಿಲೀಸ್ ಆಗಲಿದೆ.
ಬಹು ತಾರಾಗಣ ಹೊಂದಿರುವ ಪ್ರಾಜೆಕ್ಟ್-ಕೆ ಚಿತ್ರದಲ್ಲಿ ಭಾರತದ ಘಟಾನುಘಟಿ ಕಲಾವಿದರ ದಂಡೇ ಇದೆ. ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗು ಬಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಕಳೆದ ವರ್ಷ ತಮಿಳ್ ಚಿತ್ರರಂಗದ ಹೈಯೆಸ್ಟ್ ಗಳಿಕೆಯ ಹೆಗ್ಗಳಿಕೆಗೆ ಪಾತ್ರವಾದ Vikram ಚಿತ್ರದ ನಾಯಕ ಕಮಲ್ ಹಾಸನ್ ಸದ್ಯ ಎಸ್.ಶಂಕರ್ ನಿರ್ದೇಶನದ Indian-೨ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ T-Town ನಲ್ಲಿ ಪ್ರಭಾಸ್ ಅಭಿನಯದ ಪ್ರಾಜೆಕ್ಟ್-ಕೆ ಚಿತ್ರದಲ್ಲಿ ಪ್ರಭಾಸ್ ಎದುರು ಖಳ ನಾಯಕನ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ತೊಡೆ ತಟ್ಟಲಿದ್ದಾರೆ ಎಂಬ ವದಂತಿಗಳು ಜೋರಾಗಿ ಹರಿದಾಡುತ್ತಿದೆ.
ಈ ಚಿತ್ರವನ್ನು ಕೇವಲ ಒಂದು ಚಿತ್ರ ಹಳೆಯ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರ ಹಿಂದಿನ ಚಿತ್ರ ಭಾರಿ ಸಡ್ಡು ಮಾಡಿತ್ತು.

ಅಷ್ಟೇ ಅಲ್ಲದೆ ಕಮಲ್ ಹಾಸನ್ ಅವರು ಈ ಚಿತ್ರದಲ್ಲಿ ವಿಲ್ಲನ್ ಪಾತ್ರ ಮಾಡಲು ಭರ್ಜರಿ, ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ.
ಈ ಸುದ್ದಿಯು ಟ್ವಿಟ್ಟರ್ ನಲ್ಲಿ ಸಹ ಭರ್ಜರಿಯಾಗಿ ಟ್ರೆಂಡ್ ಆಗುತ್ತಿದೆ. ಅಧಿಕೃತ ಮಾಹಿತಿ ಇನ್ನು ಹೊರ ಬಿದ್ದಿಲ್ಲ ಆದರೆ ತೆಲುಗು ಫಿಲಂ ನಗರ ದಲ್ಲಿ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಬರುವವರೆಗೂ ಕಾಯೋಣ.
ಇದೆ ತರಹ ಇಂಟ್ರೆಸ್ಟಿಂಗ್ ಮಾಹಿತಿ ಪಡೆಯಲು ನಮ ವೆಬ್ಸೈಟ್ ಅನ್ನು ಆಗ್ಗಾಗ ಭೇಟಿ ನೀಡುತ್ತೀರಿ.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.