.

Shivanna: "ಬೇಕಾದ್ರೆ ನಾನೇ ಲಿಯೋಗೆ 2-3 ಥೀಯೇಟರ್ ಬಿಟ್ಕೊಡ್ತಿನಿ"। ಶಿವಣ್ಣನ ಮಾತಿಗೆ ಜನರ ಆಕ್ರೋಶ । ಲಿಯೋ vs ಘೋಸ್ಟ್ । Leo vs Ghost

 


Shivanna: ನಿನ್ನೆ ನಡೆದ ಯೌಟ್ಯೂಬ್ ಚಾನೆಲ್ನ ಇಂಟರ್ವ್ಯೂ ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್ ಅವರ ಮಾತು ಜನರಿಗೆ ಬೇಸರ ತಂದಿದೆ. ಶಿವಣ್ಣ ಅವರ ಘೋಸ್ಟ್ ಸಿನಿಮಾ ಇದೆ ಅಕ್ಟೊಬರ್ ೧೯ರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅವರ ಅಭಿಮಾನಿ, ನಟ ಹಾಗು ನಿರ್ದೇಶಕರದಂಥ MG. ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಒಟ್ಟು ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಇದೆ ಚಿತ್ರದ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿರುವ ನಟ ಶಿವಣ್ಣರವರು ಸಾಲು ಸಾಲು ಯೌಟ್ಯೂಬ್ ಚಾನೆಲ್ಗಳಿಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಚಿತ್ರದ ಟ್ರೈಲರ್ ಗೆ ಹಾಗು ಬಿಟ್ಟ ಎರಡು ಹಾಡುಗಳು (OGM - Original Gangster Music) ಯೌಟ್ಯೂಬ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿವೆ.

ಇದೆ ಅಕ್ಟೊಬರ್ ೧೯ರಂದು ನವರಾತ್ರಿ/ದಸರಾ ಹಬ್ಬದ ವಾರವಿರುವುದರಿಂದ ಎಲ್ಲಾ ಭಾಷೆಗಳಿಂದ ದೊಡ್ಡ ದೊಡ್ಡ ಸಿನಿಮಾಗಳೇ ಬಿಡುಗಡೆಯಾಗುತ್ತಿವೆ. ಕನ್ನಡದಿಂದ ಘೋಸ್ಟ್ ಚಿತ್ರ ಬಿಡುಗಡೆಯಾಗುತ್ತಿದ್ದರೆ, ತಮಿಳಿನಲ್ಲಿ ಲೋಕೇಶ ಕನಗರಾಜ್ ನಿರ್ದೇಶನದಲ್ಲಿ ತಲಪತಿ ವಿಜಯ್ ರವರ ಲಿಯೋ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ತೆಲುಗಿನಲ್ಲಿ ಎರಡು ದೊಡ್ಡ ಸಿನಿಮಾ ಬಿಡುಗಡೆಯಾಗುತ್ತಿವೆ. ಒಂದುಕಡೆ ಬಾಲಯ್ಯ್ ಅಭಿನಯದ ಭಗವಂತ ಕೇಸರಿ ಚಿತ್ರ ಬಿಡುಗಡೆಯಾದರೆ ಮತ್ತೊಂದೆಡೆ ರವಿತೇಜ ಅಭಿನಯದ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಬಿಡುಗಡೆಯಾಗುತ್ತಿದೆ. 


Leo 1000+ ಷೋಸ್, Ghost 250+ ಷೋಸ್

BookMyShowನ ಪ್ರಕಾರ ತಮಿಳಿನ ತಲಪತಿ ವಿಜಯ್ ರವರ ಲಿಯೋ ಸಿನಿಮಾಗೆ ಬೆಂಗಳೂರಿನಲ್ಲಿ ಸಾವಿರಕ್ಕೂ ಅಧಿಕ ಶೋಸ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದರೆ, ಶಿವಣ್ಣನ ದೊಡ್ಡ ಸಿನಿಮಾ ಘೋಸ್ಟ್ ಗೆ ಕೇವಲ ಎರಡುನೂರೈವತ್ತು ಶೋಸ್ ಮಾತ್ರ ದೊರಕಿದೆ. ಇದನ್ನು ನೋಡಿದ ಕೆಲ ಕನ್ನಡ ಸಿನಿಮಾ ಅಭಿಮಾನಿಗಳು ಇದರ ವಿರುದ್ಧ ಅವರ ಅಭಿಪ್ರಾಯವಾಗಿ ಕನ್ನಡ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ವಿರುದ್ಧ ಟ್ವಿಟ್ಟರ್ನಲ್ಲಿ ಸಾಕಷ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್ ಪ್ರೈಸ್ ವಿರುದ್ಧವೂ ಕನ್ನಡ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಲಿಯೋ ತಮಿಳಿನ ಸಿನಿಮಾಗೆ ತಮಿಳುನಾಡಿನಲ್ಲೇ ಗರಿಷ್ಟ 190 ರೂಪಾಯಿ ಇದೆ. ಆದರೆ ಬೆಂಗಳೂರಿನಲ್ಲಿ 600, 800,1000+ ಕ್ಕೂ ಹೆಚ್ಚು ಟಿಕೆಟ್ ಪ್ರೈಸ್ ಇತ್ತು ಕನ್ನಡಿಗರ ಹಣವನ್ನ ಹಗಲು ದರೋಡೆ ಮಾಡುತ್ತಿದ್ದಾರೆ.

Leo 1500-2000 ರೂಪಾಯಿ ಟಿಕೆಟ್ ದರ, Ghost 200-800 ರೂಪಾಯಿ ಟಿಕೆಟ್ ದರ

ಹೌದು, ತಮಿಳು ಚಿತ್ರ ಲಿಯೋಗೆ ತಮಿಳುನಾಡಿನಲ್ಲೇ ಕೇವಲ 190 ರೂಪಾಯಿ ಇದೆ. ಆದರೆ ಬೆಂಗಳೂರಿನಲ್ಲಿ ನೀವು ಒಂದೊಳ್ಳೆ ಥೀಯೇಟರ್ ನಲ್ಲಿ ಸಿನಿಮಾ ನೋಡಬೇಕೆಂದರೆ ನೀವು ಪ್ರತಿ ಟಿಕೆಟ್ಗೆ 1500-2000 ರೂಪಾಯಿ ಕೊಡ್ಬೇಕು. ಅದೇ ನೀವು ಘೋಸ್ಟ್ ಸಿನಿಮಾ ನೋಡಲು ಕೇವಲ 200-400 ಕೊಟ್ರೆ ಸಾಕು ಒಂದೊಳ್ಳೆ ಥೀಯೇಟರ್ ನಲ್ಲಿ ಸಿನಿಮಾ ನೋಡಬೋದು.





ಶಿವಣ್ಣನ ಮಾತಿಗೆ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಬೇಸರ

ನಿನ್ನೆ ನಡೆದ ಯೌಟ್ಯೂಬ್ ಚಾನೆಲೊಂದರ ಇಂಟರ್ವ್ಯೂ ನಲ್ಲಿ ಯೌಟ್ಯುಬರ್ ಒಬ್ಬರು ಶಿವಣ್ಣ ಅವರಿಗೆ ಈಗ ಸದ್ಯ ತೆಲುಗಿನ ಎರಡು ಚಿತ್ರಗಳು ಹಾಗು ತಮಿಳಿನಿಂದ ಲಿಯೋ ಚಿತ್ರ ಬರ್ತಾಯಿದೆ, ಅದಕ್ಕೆ ಥೀಯೇಟರ್ (No.of theatres) ಸಂಖ್ಯೆಗೆ ಏನಾದರೂ ತೊಂದರೆ ಆಯ್ತಾ ಎಂದು ಕೇಳಿದರು. ಅದಕ್ಕೆ ಶಿವಣ್ಣ "ಆಥರ ಏನು ಇಲ್ಲ, ಅವ್ರ್ ಥೀಯೇಟರ್ ಅವ್ರಿಗೆ ನಮ ಥೀಯೇಟರ್ ನಮಗೆ. ನಾನು ಇಂತಹ ಸಮಯದಲ್ಲಿ ಥೀಯೇಟರ್ಗೋಸ್ಕರ ಜಗಳ ಮಾಡುವವನಲ್ಲ, ಬೇಕಾದರೆ ನಾನೇ ಇನ್ನೂ 2-3 ಥೀಯೇಟರ್ ಬಿಟ್ಕೊಡ್ತಿನಿ" ಅಂತ ಹೇಳಿದರು. 
 
ಶಿವಣ್ಣ ಅವರ ಈ ಮಾತಿಗೆ ಕೆಲ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು ಅವರೆಲ್ಲ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  ಇದುವರೆಗೂ ಪರಭಾಷೆಯ ದೊಡ್ಡ ಸಿನಿಮಾಗಳು ಬಂದಾಗ ನಮ್ಮ ಎಷ್ಟೋ ಸಿನಿಮಾಗಳಿಗೆ ಥೀಯೇಟರ್ ಸಿಗದೇ ಇರೋ ಕಾರಣಕ್ಕೆ ಎಷ್ಟೋ ಸಿನಿಮಾಗಳು ಲಾಸ್ ಆಗಿವೆ. ಅದಕ್ಕಾಗಿ ಥೀಯೇಟರ್ ಸಮಸ್ಯೆ ವಿರುದ್ಧ ಮಾತನಾಡಬೇಕಿದ್ದ ಶಿವಣ್ಣ ಇನ್ನು ಪರಭಾಷಿಕರ ಸಿನೆಮಾಗೆ ತಮ್ಮ ಥೀಯೇಟರ್ ಗಳನ್ನೂ ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಕೆಲ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.

ಇದಕ್ಕೆ ನಿಮ್ಮ ಅಭಿಪ್ರಾಯ ಏನು? ಹಾಗು ಈ ವಾರ ನೀವು ಯಾವ ಸಿನಿಮಾ ನೋಡ್ಬೇಕು ಅಂತ ಅನ್ಕೊಂಡಿದ್ದೀರಿ?

ಶಿವಣ್ಣ ಮಾತನಾಡಿದ ಇಂಟರ್ವ್ಯೂ ನ ವಿಡಿಯೋ ಇಲ್ಲಿದೆ

ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.