.

ಈ ವರ್ಷ ದೀಪಾವಳಿ ಯಾವಾಗ? Deepavali 2023 date in karnataka । ದೀಪಾವಳಿ ಹಬ್ಬದ ಶುಭಾಶಯಗಳು

ದೀಪಾವಳಿ ಹಬ್ಬದ ಶುಭಾಶಯಗಳು: ಎಲ್ಲರಿಗೂ ಈ ವರ್ಷದ ದೀಪಾವಳಿ ಹಬ್ಬದ ಶುಭಾಶಯಗಳು. ಈ ವರ್ಷ ದೀಪಾವಳಿಯನ್ನು ನಾವೆಲ್ಲಾ ನಮ್ಮ ಸ್ನೇಹಿತರು ಹಾಗು ಬಂಧು-ಮಿತ್ರರೊಂದಿಗೆ ತುಂಬಾ ಅದ್ಧುರಿಯಾಗಿ ಆಚರಿಸೋಣ. ದೀಪಗಳ ಹಬ್ಬ ದೀಪಾವಳಿಯನ್ನು ಎಲ್ಲರು ದೀಪಗಳನ್ನು ಬೆಳಗುವುದರ/ಹಚ್ಚುವುದರ ಮೂಲಕ ಆಚರಿಸುತ್ತೇವೆ. ಅದಕ್ಕಾಗಿ ಇದನ್ನು ದೀಪಾವಳಿ ಎಂದು ಕರೆಯುತ್ತೇವೆ. ಅತ್ಯಂತ ಸಡಗರ, ಸಂಭ್ರಮ, ಖುಷಿಯಿಂದ ಹಾಗು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ಸಂತೋಷವನ್ನು ದ್ವಿಗುಣಗೊಳಿಸಿ ಆಚರಿಸಬಹುದು. 


ಲಕ್ಷಿ ದೇವಿ ಸಿರಿ ಸಂಪತ್ತಿನ ಪ್ರತೀಕ. ಲಕ್ಷಿ ದೇವಿಯನ್ನು ಸ್ವಚ್ಛ ಮನಸ್ಸಿನಿಂದ ಆರಾಧಿಸಿದರೆ ಸಾಕು ಭಕ್ತರ ಆಸೆಗಳನ್ನು ಹಾಗು ಅಷ್ಟ ಐಶ್ವರ್ಯಗಳನ್ನು ಪೂರೈಸುವಂತ ಮಹಾತಾಯಿ. ಇಂತಹ ಮಹಾತಾಯಿಯನ್ನು ದೀಪಾವಳಿಯ ದಿನ ಪೂಜಿಸಿದರೆ ಸುಖ ಸಂಪತ್ತು ಸಮೃದ್ಧಿಯಾಗಿ ಲಭಿಸುತ್ತದೆ.


ಈ ವರ್ಷ ದೀಪಾವಳಿ ಯಾವಾಗ?: ಈ ವರ್ಷ ದೀಪಾವಳಿ ಒಟ್ಟು ಮೂರು ದಿನ ಇದೆ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 12 ರಂದು ಶುರುವಾಗಿ ಮೂರನೆಯ ದಿನ ಅಂದರೆ 14 ನವೆಂಬರ್, 2023ಕ್ಕೆ ಮುಗಿಯಲಿದೆ. ಈ ಹಬ್ಬದ ವಿಶೇಷತೆ ಏನೆಂದರೆ ಈ ಹಬ್ಬವನ್ನು ಭಾರತ ಪ್ರತಿಯೊಂದು ರಾಜ್ಯದಲ್ಲಿ ಏಕಕಾಲದಲ್ಲಿ ಆಚರಿಸುತ್ತಾರೆ.  ಕೆಲವೊಂದು ಹಬ್ಬಗಳು ಕೆಲವೊಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತವೆ.


ದೀಪಾವಳಿ ಹಬ್ಬದ ವಿಶೇಷತೆ: ದೀಪಾವಳಿ ಹಬ್ಬದಂದು ಎಲ್ಲರು ಹೊಸ ಬಟ್ಟೆ ತೊಟ್ಟುಕೊಂಡು ಮನೆಗೆ ಅಲಂಕಾರ್ ಮಾಡಿ ಮನೆಯಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡುತ್ತಾರೆ. ಎಲ್ಲರು ಲಕ್ಷಿ ದೇವಿಯ ಕೃಪಾ-ಕಟಾಕ್ಷಕ್ಕೆ ಪಾತ್ರರಾಗಲೆಂದು ಬಯಸುತ್ತಾರೆ. ಹಾಗೆ ಸಂಜೆ ಲಕ್ಷಿ ದೇವಿಯ ಪೂಜೆಯಾದ ನಂತರ ಪಟಾಕಿಗಳನ್ನು ಹಾರಿಸಿ ಖುಷಿಯಾಗುತ್ತಾರೆ. 


ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ: ದೀಪಾವಳಿಯನ್ನು ಆಚರಿಸುವುದಕ್ಕೂ ಒಂದು ಮಹತ್ವವಾದ ಕಾರಣವಿದೆ. ಒಂದು ಪುರಾಣದ ಪ್ರಕಾರ ಮಹಾಲಕ್ಷ್ಮಿ ದೇವಿಯು ವೈಕುಂಠದಿಂದ ದೀಪಾವಳಿ ಅಮಾವಾಸ್ಯೆ ದಿನದಂದು ಭೂಮಿಗೆ ಬಂದು ಜನರ ಆಸೆಯನ್ನು ನೆರೆವೇರಿಸುತ್ತಾಳೆ ಎಂದು ನಂಬಿಕೆ. 


ರಾಮಾಯಣದಿಂದಲೂ ಈ ದೀಪಾವಳಿ ಹಬ್ಬವನ್ನು ಆಚರಿಸುವುದುಂಟು. ಯುಗುಪುರುಷ ಶ್ರೀ ರಾಮನು ವಾನರ ಸೈನ್ಯದೊಂದಿಗೆ ಹತ್ತು ತಲೆಯ ರಾವಣನೊಂದಿಗ್ಗೆ ಯುದ್ಧ ಮಾಡಿ, ಹಾಗು ರಾವಣನ ಸಂಹಾರ ಮಾಡಿ ಲಂಕಾದಿಂದ ಸೀತ ಮಾತೆಯನ್ನು ಕರೆದುಕೊಂಡು ಮರಳಿ ಭಾರತದ ಅಯೋಧ್ಯೆಗೆ ಬಂದಿದ್ದ ದಿನ ಅಯೋಧ್ಯೆಯ ಜನರೆಲ್ಲಾ ಊರ ತುಂಬೆಲ್ಲ ದೀಪವನ್ನು ಬೆಳಗುವುದರ ಮೂಲಕ, ಅಂದವಾದ ರಂಗೋಲಿಯನ್ನು ಬಿಡಿಸುವುದರ ಮೂಲಕ ಪ್ರಭು ಶ್ರೀ ರಾಮನನ್ನ ಅಯೋಧ್ಯೆಗೆ ಬರಮಾಡಿಕೊಂಡರು. ಹಾಗು ಆವಾಗಿನಿಂದ ಇವತ್ತಿನ ವರೆಗೂ ದೀಪಾವಳಿಯನ್ನು ಆಚರಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.