"ಧೋನಿಯ ಈ ಕೆಲಸಕ್ಕೆ ಫ್ಯಾನ್ಸ್ ಎಲ್ಲಾ ಶಾಕ್!!!" MSD's action has left fans shocking!!
IPL Champions Chennai Super Kings
ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ನ ೧೫ನೇ ಆವೃತ್ತಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ. ಟಾಟಾ ಐಪಿಎಲ್ ನ ಕೊನೆಯ ಫೈನಲ್ ಮ್ಯಾಚ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಮುಖಾಮುಖಿಯಾಗಿತ್ತು. ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ವಾಲಿಫೈರ್-೧ ರಲ್ಲಿ ಇದೆ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಜಯ ಸಾಧಿಸಿ ಡೈರೆಕ್ಟ್ ಫೈನಲ್ ಗೆ ಎಂಟ್ರಿ ಕೊಟ್ಟಿತ್ತು. ಕ್ವಾಲಿಫೈರ್ ಸೋತಿದ್ದ ಕಾರಣ ಮುಂಬೈ ಜೊತೆಗೆ ಮತ್ತೆ ಕ್ವಾಲಿಫೈರ್-೨ ನಲ್ಲಿ ಜಯ ಸಾಧಿಸಿ ಗುಜರಾತ್ ಟೈಟಾನ್ಸ್ ತಂಡ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಫೈನಲ್ ಆಡಲು ಅರ್ಹತೆ ಯಾಗಿತ್ತು.
ಭಾನುವಾರ ನಡೆಯಬೇಕಿದ್ದ ಫೈನಲ್ ಮ್ಯಾಚ್ ಮಳೆಯ ಕಾರಣದಿಂದಾಗಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಸೋಮವಾರ ಉಭಯ ತಂಡಗಳ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗು ಹಾರ್ದಿಕ್ ಪಾಂಡ್ಯ ಇಬ್ಬರು ಟಾಸ್ಸ್ ಮಾಡಲು ಬಂದಿದ್ದರು. ನಾಯಕ ಮಹೇಂದ್ರ ಸಿಂಗ್ ಧೋನಿ ಇಷ್ಟು ದಿವಸ ಅವರು ಟಾಸ್ಸ್ ಮಾಡಿದ ಪ್ರತಿ ಮ್ಯಾಚ್ ನಲ್ಲೂ ತಮ್ಮ ಬಲಗೈಯ ಮೂಲಕ ಕಾಯಿನನ್ನು ಎಸೆಯುತ್ತಿದ್ದರು. ಆದರೆ ಈ ಬಾರಿ ಎಡಗೈಯ ಮೂಲಕ ಕಾಯಿನನ್ನು ಎಸೆದದ್ದು ಎಲ್ಲರು ಬೆರಗಾಗುವಂತೆ ಮಾಡಿದೆ.
ಕೆಲವರು ಇದಕ್ಕೆ ವಾಸ್ತು, ಜಾತಕ, ಭವಿಷ್ಯ ಮತ್ತು ಶಾಸ್ತ್ರದ ಬಣ್ಣ ಕಟ್ಟುತ್ತಿದ್ದಾರೆ. ಅವರು ಕಪ್ ಗೆದ್ದಿರುವ ಕಾರಣ ಕೆಲವರು "ಹೌದು, ಇದ್ದಿರಬಹುದು!!" ಅಂತಲೂ ಹೇಳುತ್ತಿದ್ದಾರೆ. ಸತ್ಯಂಶ ಮಾತ್ರ ಸ್ವತಃ ಮಹೇಂದ್ರ ಸಿಂಗ್ ಧೋನಿ ಅವರಇಗೆ ಮಾತ್ರ ಗೊತ್ತು. ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದಿರುವುದು ಅಂತೂ ಸತ್ಯ.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.