UPI ಪಿನ್ ಹಾಕದೇನೆ UPI ಪೇಮೆಂಟ್ ಮಾಡಬಹುದು | Make UPI payment without UPI using UPI Lite
ಯುಪಿಐ (UPI) ಬಂದಾಗಿನಿಂದಲೂ ಜನರಿಗೆ ತುಂಬಾ ಉಪಕಾರಿಯಾಗಿ ಹಾಗೂ ಸಹಕಾರಿಯಾಗಿದೆ. ತುಂಬಾ ವೇಗವಾಗಿ ಇದು ಕಾರ್ಯ ನಿರ್ವಹಿಸುವುದಕ್ಕೆ ಇದನ್ನು ಜನ ಇದನ್ನ ಹೆಚ್ಚಾಗಿ ಉಪಯೋಗಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿಯ ವ್ಯವಹಾರ ಮಾಡುತ್ತಿದ್ದಾರೆ.
ಇನ್ಮೇಲೆ ನೀವು ಯುಪಿಐ ಪೇಮೆಂಟ್ ಮಾಡುವಾಗ ಸ್ವಲ್ಪ ಸಮಯ ಉಳಿಸಬಹುದು.
UPI ನವರು UPI ಲೈಟ್ ವರ್ಷನ್ ಬಿಡುಗಡೆ ಮಾಡಿದ್ದಾರೆ. ಯುಪಿಐ ಮುಖ್ಯ ಭಾಗವಾದರೆ, ಯುಪಿಐ ಲೈಟ್(UPI Lite) ಅದರ ಸಣ್ಣ ಭಾಗ. ಇದು ಒಂದು ಥರ ವ್ಯಾಲೆಟ್ ನಂತೆ ಕೆಲಸ ಮಾಡುತ್ತದೆ. ಇದಕ್ಕೆ ನಾವು ಹಣವನ್ನು ಮುಂಗಡವಾಗಿ ಲೋಡ್ ಮಾಡಿಕೊಳ್ಳಬೇಕು. ನೀವು ಭೀಮ್ ಯುಪಿಐ (BHIM UPI) ನಲ್ಲಿ ಯುಪಿಐ ಲೈಟ್ ಸೆಟಪ್ ಮಾಡುವಾಗ ಅದು ನಮಗೆ ಹಣ ಜಮಾ ಮಾಡುವ ಆಪ್ಷನ್ ತೋರಿಸುತ್ತದೆ.
ಗರಿಷ್ಠ 2000 ರೂಪಾಯಿಯ ವರೆಗೆ ಹಣ ಜಮಾ ಮಾಡಿಟ್ಟುಕೊಳ್ಳಬಹುದು. ಯಾವುದಾದರೂ ಸಣ್ಣ ಪುಟ್ಟ ವ್ಯವಹಾರ ಮಾಡಿದಾಗ UPI ನ ಬದಲು UPI ಲೈಟ್ ಬಳಸಿದರೆ ಯಾವುದೇ UPI ಪಿನ್ ನಮೂದಿಸುವ ಅವಶ್ಯಕತೆ ಬರುವುದಿಲ್ಲ. ಒಂದು ಟ್ರಾನ್ಸಾಕ್ಷನ್ಗೆ ಗರಿಷ್ಠ 200 ರೂಪಾಯಿವರೆಗೆ ವ್ಯವಹಾರ ಮಾಡಬಹುದು.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.