ಕಾಲ್ ರೆಕಾರ್ಡಿಂಗ್ ಅನೌನ್ಸ್ಮೆಂಟ್ ಬಂದ್ ಮಾಡುವುದು ಹೇಗೆ?? This call will now be recorded | How to stop call recording announcement 2023
ಆಂಡ್ರಾಯ್ಡ್ 10 ಅಥವಾ ಅದರ ನಂತರ ಬಂದ ಆಂಡ್ರಾಯ್ಡ್ ವರ್ಷನಲ್ಲಿ ಸೆಕ್ಯೂರಿಟಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಆಂಡ್ರಾಯ್ಡ್ 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಲ್ಲಿ ಸೆಕ್ಯೂರಿಟಿ ಕಾರಣಕ್ಕಾಗಿ ಕಾಲ್ ರೆಕಾರ್ಡಿಂಗ್ ಮೇಲೆ ಹೆಚ್ಚಿನ ನಿರ್ಬಂಧವನ್ನು ಹೇರಲಾಗಿದೆ. ಮೊದಲಿನ ಆಂಡ್ರಾಯ್ಡ್ ವರ್ಷನ್ ನಲ್ಲಿ ನಾವು ಯಾರ ಜೊತೆ ಯಾರ ಜೊತೆಯಾದರೂ ಕಾಲ್ ನಲ್ಲಿ ಮಾತನಾಡುತ್ತಿದ್ದಾಗ ಕಾಲ್ ರೆಕಾರ್ಡಿಂಗ್ ಬಟನ್ ಒತ್ತಿದರೆ ಕಾಲ್ ರೆಕಾರ್ಡಿಂಗ್ ಮಾಡಬಹುದಾಗಿತ್ತು. ಆದರೆ ಈಗ ನಿರ್ಬಂಧವನ್ನು ಹೇರಲಾಗಿದೆ.
ಈಗ ಕಾಲ್ ರೆಕಾರ್ಡಿಂಗ್ ಬಟನ್ ಮೇಲೆ ಓತ್ತಿದರೆ ದಿಸ್ ಕಾಲ್ ವಿಲ್ ನೌ ಬಿ ರೆಕಾರ್ಡೆಡ್ (This call will now be recorded) ಅಂತ ಕರೆಯಲ್ಲಿ ಆಚೆಕಡೆ ಮಾತನಾಡುವವರಿಗೆ ಹಾಗೂ ಈಚೆ ಕಡೆ ಮಾತನಾಡುವವರಿಗೆ ಕೇಳಿಸುತ್ತದೆ. ಹೀಗೆ ಮಾಡುವುದರಿಂದ ಆಚೆ ಕಡೆಯ ವ್ಯಕ್ತಿಗೆ ತನ್ನ ಕಾಲ್ ರೆಕಾರ್ಡ್ ಆಗುವುದಾಗಿ ತಿಳಿಯುತ್ತದೆ. ಈ ಫೀಚರ್ ಅನ್ನು ಸೆಕ್ಯೂರಿಟಿಯ ಕಾರಣದಿಂದಾಗಿ ಮಾಡಿದರು ಸಹ ಕೆಲವೊಮ್ಮೆ, ಕೆಲವೊಂದು ಸಂದರ್ಭದಲ್ಲಿ ನಮಗೆ ಕಾಲ್ ರೆಕಾರ್ಡ್ ಫೀಚರ್ ಬೇಕಾಗುತ್ತದೆ. ಇಂದು ನಾವು ಆ ಕಾಲ್ ಅನೌನ್ಸ್ಮೆಂಟ್ ಅನ್ನು ನಿಲ್ಲಿಸುವುದು ಹೇಗೆ ಎಂದು ಹೇಳುತ್ತೇವೆ.
ಅದಕ್ಕಾಗಿ ನೀವು ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಸರ್ಚ್ ಬಾಕ್ಸ್ ನಲ್ಲಿ TTSLexx ಅಂತ ಸರ್ಚ್ ಮಾಡಿ ಹಾಗೂ ಇನ್ಸ್ಟಾಲ್ ಮಾಡಿ.
ನಂತರ ಇನ್ಸ್ಟಾಲ್ ಮಾಡಿದ ಆಪನ್ನು ಓಪನ್ ಮಾಡಿ. ನಂತರ ಅಲ್ಲಿ ಕಾಣಸಿಗುವ ಮೊದಲನೇ ಆಪ್ಷನ್ ಪ್ರೆಫರ್ಡ್ ಇಂಜಿನ್ ಆಪ್ಷನ್ ಮೇಲೆ ಒತ್ತಿ, ನಂತರ TTSLexx Engine ಅನ್ನು ಸೆಲೆಕ್ಟ್ ಮಾಡಿ.
ನಂತರ ನೀವು ಕಾಲ್ ಮಾಡುವ ಆಪ್ ಅಂದರೆ ಕಾಂಟಾಕ್ಟ್ ಆಪ್ ನ ಡಾಟಾವನ್ನು ಕ್ಲಿಯರ್ ಮಾಡಿ ಅಂದರೆ ಕ್ಲಿಯರ್ ಡೇಟಾ ಮಾಡಿ. ಈಗ ನಿಮ್ಮ ಫೋನನ್ನು ಒಮ್ಮೆ ರೀ ಸ್ಟಾರ್ಟ್ ಮಾಡಿ. ಇಷ್ಟು ಮಾಡಿದರೆ ಸಾಕು ಇನ್ನು ಮೇಲಿಂದ ಆ ಕಾಲ್ ಅನೌನ್ಸ್ಮೆಂಟ್ ಬರುವುದಿಲ್ಲ.
ಇದೇ ತರದ ಇನ್ನೂ ಹೆಚ್ಚಿನ ಹಾಗೂ ಹೊಸ ಇನ್ಫಾರ್ಮಶನ್ ಗಳಿಗಾಗಿ ನಮ್ಮ ಬ್ಲಾಗನ್ನು ಆಗಾಗ ಚೆಕ್ ಮಾಡುತ್ತ ಇರಿ. ಧನ್ಯವಾದಗಳು.
Post Comment