.

ಈ 3 ವಾಟ್ಸಪ್ ಟ್ರಿಕ್ಸ ಗಳನ್ನು ಈಗಲೇ ತಿಳಿದುಕೊಳ್ಳಿ | WhatsApp Tips & Tricks 2023 | Kannada Blog



ವಾಟ್ಸಪ್ ಬಂದಾಗಿನಿಂದಲೂ ಕೋಟ್ಯಂತರ ಜನ ಅದನ್ನ ಉಪಯೋಗಿಸುತ್ತಿದ್ದಾರೆ. ಇಂದು ಜನ ಇದರ ವ್ಯಸನಿಗಳಾಗಿದ್ದರೆ. ವಾಟ್ಸಪ್ ಸಹ ದಿನಗಳು ಕಳೆದಂತೆ ಹೊಸದೊಂದು ಫಿಚರನ್ನು ಬಳಕೆದಾರರಿಗೆ ಕೊಡುತ್ತಲೇ ಬಂದಿದ್ದಾರೆ. ಈಗ ಮತ್ತೆ ಈ 3 ಹೊಸ ಫೀಚರ್ ಅಳವಡಿಸಿದ್ದಾರೆ. ಈ 3 ಫೀಚರ್ ಬಳಕೆದಾರರಿಗೆ ಅನುಕೂಲವಾಗಲಿವೆ.

1. ಯಾರಿಗೂ ಗೊತ್ತಾಗದ ಹಾಗೆ ವಾಟ್ಸಪ್ ಸ್ಟೇಟಸ್ ನೋಡಬಹುದು

ಹೌದು, ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರ ಅಥವಾ ಯಾರದೇ ಸ್ಟೇಟಸ್ ನೋಡಿದರೂ ಅವರಿಗೆ ಗೊತ್ತಾಗದ ಹಾಗೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾದ ಸೆಟ್ಟಿಂಗ್ಸ್.

ಸೆಟ್ಟಿಂಗ್ಸ್:- ವಾಟ್ಸಪ್ ಓಪನ್ ಮಾಡಿ > 3 ಡಾಟ್ಸ್ ಮೇಲೆ ಕ್ಲಿಕ್ ಮಾಡಿ > ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ > ಪ್ರೈವಸಿ ಬಟನ್ ಮೇಲೆ ಕ್ಲಿಕ್ ಮಾಡಿ > Read receipts ಅನ್ನು ಆಫ್ ಮಾಡಿ.

Whatsapp tricks kannada

ಇಷ್ಟು ಮಾಡಿದರೆ ಸಾಕು, ನೀವು ಯಾರ ಸ್ಟೇಟಸ್ ನೋಡಿದರೂ ಸಹ ಅವರಿಗೆ ಗೊತ್ತಾಗುವುದಿಲ್ಲ.

2. ನಂಬರ್ ಸೇವ್ ಮಾಡದೆ ಮೆಸೇಜ್ ಮಾಡಬಹುದು

ಮೊದಲೆಲ್ಲ ಯಾರಿಗಾದರೂ ವಾಟ್ಸಪ್ ನಲ್ಲಿ ಮೆಸೇಜ್ ಕಳುಹಿಸಬೇಕಾದರೆ ಅವರ ನಂಬರನ್ನು ಸೇವ್ ಮಾಡಬೇಕಾಗಿತ್ತು. ಆದರೆ ಹೊಸ ಅಪ್ಡೇಟ್ ನ ನಂತರ ನೀವು ಯಾವುದೇ ನಂಬರನ್ನು ಸೇವ್ ಮಾಡದೆ ಮೆಸೇಜ್ ಮಾಡಬಹುದು.

ಇದಕ್ಕಾಗಿ ನಾವು ಮಾಡಬೇಕಾದುದು ಇಷ್ಟೇ, ಯಾವುದಾದ್ರೂ ನಂಬರ್ನನ ಚಾಟ್ ಹೋಗಿ ಅಲ್ಲಿ ನೀವು ಯಾರ ನoಬರ್ಗೆ ಮೆಸೇಜ್ ಕಳುಹಿಸಬೇಕೆಂದು ಅಂದುಕೊಂಡಿದ್ದೀರೋ ಆ ನಂಬರನ್ನು ಟೈಪ್ ಮಾಡಿ ಕಳುಹಿಸಿ. ನಂತರ ಆ ನಂಬರ್ನ್ ಮೇಲೆ ಟ್ಯಾಪ್ ಮಾಡಿ, ಆವಾಗ

  • Chat with (ನೀವು ಟೈಪ್ ಮಾಡಿದ ನಂಬರ್)
  • Call on WhatsApp
  • Add to Contacts

ಅಂತ 3 ಓಪ್ಷನ್ಸ್ ಬರುತ್ತದೆ. ಮೊದಲನೇ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ಸೇವ್ ಮಾಡದೆ ಮೆಸೇಜ್ ಮಾಡಬಹುದು.

Whatsapp tricks kannada

3. ಫಿಂಗರ್ ಪ್ರಿಂಟ್ ಲಾಕ್ ಇಡಬಹುದು

ಇನ್ನು ಮುಂದೆ ನೀವು ವಾಟ್ಸಪ್ ಗೆ ಫಿಂಗರ್ ಪ್ರಿಂಟ್ ಲಾಕ್ ಸಹ ಮಾಡಬಹುದು. ಇನ್ನು ಮುಂದೆ ನೀವು ಯಾರಿಗಾದರು ಫೋನ್ ಕೊಡುವಾಗ ಯಾವುದೇ ಟೆನ್ಶನ್ ಇಲ್ಲದೆ ಕೊಡಬಹುದು

ಸೆಟ್ಟಿಂಗ್ಸ್:- ವಾಟ್ಸಪ್ ಓಪನ್ ಮಾಡಿ > 3 ಡಾಟ್ಸ್ ಮೇಲೆ ಕ್ಲಿಕ್ ಮಾಡಿ > ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ > ಪ್ರೈವಸಿ ಬಟನ್ ಮೇಲೆ ಕ್ಲಿಕ್ ಮಾಡಿ > ಪೂರ್ತಿ ಕೆಳಗೆ ಸ್ಕ್ರೋಲ್ ಮಾಡಿ > ಫಿಂಗರ ಪ್ರಿಂಟ್ ಲಾಕ್ ಬಟನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ >

Whatsapp tricks kannada

ನಂತರ ಮತ್ತೆ ಇನ್ನೂ ಹಲವು ಅಪ್ಶನಗಳು ಕಾಣಸಿಗುತ್ತವೆ. ನಿಮ್ಮ ಉಪಯೋಗಕ್ಕೆ ಅನುಗುಣವಾಗಿ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದು.

ಈ 3 ವಾಟ್ಸಪ್ ಫೀಚರ್ ಅನ್ನು ದಿನಾಲೂ ಬಳಸಿ. ಹಾಗೆ ವಾಟ್ಸಪ್ ಬಳಸುವ ನಿಮ್ಮ ಸ್ನೇಹಿತರಿಗು ಸಹ ಇದರ ಬಗ್ಗೆ ತಿಳಿಸಲು ಈ ಬ್ಲಾಗನ್ನು ಕಳುಹಿಸಿ.